About KSAT | Karnataka State Administrative Tribunal
  • About ksat

               ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ ಸೇವಾ ವಿವಾದಗಳಲ್ಲಿನ ಸಂಖ್ಯೆಯಲ್ಲಿನ ಹೆಚ್ಚಳವು ಒಂದು ತೀವ್ರತರ ಸಮಸ್ಯೆಯಾಗಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಷಾರವರ ಅಧ್ಯಕ್ಷತೆಯ ಸಮಿತಿ ಸರ್ವೋಚ್ಚ ನ್ಯಾಯಾಲಯ ಹಾಗೂ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿರುವ ಸೇವಾ ವಿವಾದಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಸ್ವತಂತ್ರ ನ್ಯಾಯಮಂಡಳಿಗಳನ್ನು ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಿತು.  ಹಾಗೆಯೆ ಆಡಳಿತ ಸುಧಾರಣಾ ಆಯೋಗವು ಸರ್ಕಾರಿ ನೌಕರರ ಶಿಸ್ತಿಗೆ ಸಂಬಂಧಿಸಿದಂತೆ ನಾಗರಿಕ ಸೇವಾ ಆಡಳಿತ ನ್ಯಾಯಮಂಡಳಿಗಳನ್ನು ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಿತು ಮತ್ತು ಸರ್ವೋಚ್ಚ ನ್ಯಾಯಾಲಯವುರಾಮಚಂದ್ರ ಶಂಕರ ದೇವಧರ್ ಮತ್ತು ಇತರೇ  -  ವಿರುದ್ಧ  -  ಮಹಾರಾಷ್ಟ್ರ ರಾಜ್ಯ (ಎ.ಐ.ಆರ್.1974 ಎಸ್.ಸಿ. 259) ಮೊಕದ್ದಮೆಯಲ್ಲಿಸರ್ಕಾರಿ ಉದ್ಯೋಗಿಗಳ ಸೇವೆಗೆ ಸಂಬಂಧಿಸಿದ ವಿವಾದಗಳು ನ್ಯಾಯಾಲಯಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಇರುವುದನ್ನು  ಕೂಡ ಗಮನಿಸಿತು.  ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಲೋಕಸಭೆಯು ಆಡಳಿತ ನ್ಯಾಯಮಂಡಳಿಗಳ ವಿಧೇಯಕವನ್ನು 1985ರಲ್ಲಿ ರೂಪಿಸಿ ದಿನಾಂಕ: 27.07.1985 ರಂದು ರಾಷ್ಟ್ರಪತಿ ಅನುಮೋದನೆ ಪಡೆದ ನಂತರ ಸದರಿ ವಿದೇಯಕವು ಕಾಯ್ದೆಯಾಗಿ 1985ರ ನವೆಂಬರ್ ಒಂದರಿಂದ ಜಾರಿಯಲ್ಲಿದೆ.  ಈ ಕಾಯ್ದೆಯಡಿಯಲ್ಲಿ ಕೇಂದ್ರೀಯ ಮತ್ತು ರಾಜ್ಯ ಆಡಳಿತ ನ್ಯಾಯಮಂಡಳಿಗಳು ಸ್ಥಾಪಿತವಾಗಿದೆ.   ಅದರಂತೆ, ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು, ಕೇಂದ್ರ ಸರ್ಕಾರದ ಅಧಿಸೂಚನೆ ಸಂಖ್ಯೆ  ಎ -11019:20:76:ಎಟಿ,  ದಿನಾಂಕ 03.10.1986  ರಂತೆ, 06.10.1986  ರಿಂದ ಸ್ಥಾಪಿಸಲ್ಪಟ್ಟು ಕಾರ್ಯನಿರ್ವಹಿಸುತ್ತಿದೆ.